ಇಂದಿನ ವಾಕ್ಯ ಭಾಗ: ಯೋಬ 36:26-29 ; 37:5-7

ಪ್ರತೀ ವರ್ಷ ನಗರದಲ್ಲಿ ಆಗುವ ಬದಲಾವಣೆಯ ಬಗ್ಗೆ ಯು.ಎಸ್‌ ನ ಮಧ್ಯಮ ವರ್ಗದ ವಾದ್ಯದವರು ಹಾಡುತ್ತಿದ್ದರು. ”ವರ್ಷದಲ್ಲಿ ಮೊದಲ ಸಲ ಮಳೆ ಬೀಳುವಾಗೆಲ್ಲಾ, ಏನೋ ಪವಿತ್ರವಾದ ಸಂಗತಿಯು ಆಗುತ್ತದೆ ಎಂದು ನನಗನಿಸಿತು” ಎಂದು ವಾದ್ಯದ ಗುಂಪಿನವರಲ್ಲಿ ಒಬ್ಬನು ವಿವರಿಸಿದನು. ”ಅದೊಂದು ಹೊಸ ಆರಂಭದಂತೆ ಇರುವುದು. ಆಗ ನಗರದ ನಿವಾಸಿಗಳು ನಿಧಾನವಾಗಿ ಮಂದಗತಿಯಲ್ಲಿ ಸಾಗುವರು.”

ದಟ್ಟದಾದ ಹಿಮಪಾತವನ್ನು ನೀನು ಕಂಡಿದ್ದರೆ, ಅದರಿಂದ ಒಂದು ಹಾಡನ್ನು ಹೇಗೆ ಹುಟ್ಟುಹಾಕಬಹುದೆಂದು ನಿನಗರಿವಾಗುವದು. ದೊಡ್ಡದಾದ ಪ್ರಶಾಂತತೆಯು ಲೋಕವನ್ನು ಸೆಳೆದು, ಅದರಲ್ಲಿನ ಕಠೋರತೆಯನ್ನು ಮರೆಮಾಡುತ್ತದೆ. ಕೆಲವು ಕ್ಷಣ, ನಮ್ಮನ್ನು ಸಂತೋಷಗೊಳಿಸುವ ಹಾಗೆ, ಲೇಖಕನ ಮಂದತೆಯನ್ನು ಹೊಳಪುಗೊಳಿಸುತ್ತದೆ.

ಯೋಬನ ಸ್ನೇಹಿತನಾಗಿದ್ದ ಎಲೀಹು ನಮ್ಮ ಗಮನ ಸೆಳೆಯುವ ದೇವರ ಸೃಷ್ಟಿಯ ಕುರಿತು ದಿವ್ಯ ದೃಷ್ಟಿಯನ್ನು ಹೊಂದಿದ್ದನು. “ದೇವರು ತನ್ನ ಧ್ವನಿಯಿಂದ ಅದ್ಭುತವಾಗಿ ಗುಡುಗುವನು” (ಯೋಬ 37:5). ಆತನು ಹಿಮಕ್ಕೂ ಭೂಮಿಯ ಮೇಲೆ “ಬೀಳು ಎಂದು ಅಪ್ಪಣೆ ಮಾಡುವನು. ಮಳೆಯೂ ಹಿಮವೂ ಬೀಳುವದು.” ದೊಡ್ಡ ಮಳೆಗೂ ಅಪ್ಪಣೆ ಮಾಡುವನು” ಇಂತಹ ಪ್ರಭಾವವು ನಮ್ಮ ಅರಿವಿಗೆ ಬರುತ್ತದೆ. ಪವಿತ್ರವಾದ ಯೋಚನೆಗಳು ಬರುತ್ತವೆ. “ಎಲ್ಲರೂ ತನ್ನ ಕೆಲಸವನ್ನು ತಿಳಿದುಕೊಳ್ಳಬೇಕೆಂದು ಪ್ರತಿಯೊಬ್ಬನ ಕೈಯನ್ನು ಮುದ್ರಿಸುವನು” ಎಂದು ಎಲೀಹು ಹೇಳಿರುವನು (6-7).

ನಮಗೇನು ಆಗುತ್ತದೋ, ನಾವು ಏನನ್ನು ಸುತ್ತಮುತ್ತ ಗಮನಿಸುವೆವೋ, ಅಂತೂ ನಮಗೆ ಇಷ್ಟವಾಗದ ರೀತಿಯಲ್ಲಿ  ಪ್ರಕೃತಿಯು ಕೆಲ ಸಮಯಗಳಲ್ಲಿ ನಮ್ಮ ಗಮನ ಸೆಳೆಯುತ್ತದೆ. ಪ್ರತೀ ಕ್ಷಣ-ಗಹನವಾದವುಗಳೂ, ಭೀತಿಯುಳ್ಳವುಗಳೂ- ಅಥವಾ ಲೋಕದ ಇನ್ನಾವುದೋ ಸಂಗತಿಗಳು ನಮ್ಮ ಆರಾಧನೆಯನ್ನು ಪ್ರೇರಿಸುತ್ತವೆ. ನಮ್ಮಲ್ಲಿನ ಕವಿಯ ಹೃದಯವು ಪವಿತ್ರ ಚಿಂತನೆಗಳತ್ತ ನಡೆಸುತ್ತವೆ.

ಟಿಮ್‌ ಗುಸ್ಟಾಪ್‌ ಸನ್‌

ಯಾವ ವಿಚಾರಗಳು ಇಲ್ಲವೆ ಘಟನೆಗಳು ನಿನ್ನ ಗಮನವನ್ನು ದೇವರ ದೊಡ್ಡಸ್ತಿಕೆಯತ್ತ ಸೆಳೆಯುತ್ತದೆ? ಇಂದು ನಿನ್ನ ಸಾಮಾನ್ಯ ವಿಚಾರಗಳಲ್ಲಿ ದೇವರ ಅದ್ಭುತವನ್ನು ಹೇಗೆ ಅನುಭವಿಸುವಿ?

ತಂದೆಯೇ, ಇಂದು ಎಲ್ಲಾ ವಿಷಯಗಳಲ್ಲಿಯೂ ನಿನ್ನ ಹಸ್ತವನ್ನು ಕಾಣುವಂತೆ ಮಾಡು. ನಿನ್ನ ಆಶ್ಚರ್ಯಕರ ಕಾರ್ಯಗಳನ್ನು ಕಾಣುವ ಹೃದಯವನ್ನು ನನಗೆ ಕೊಡು.

ಕನ್ನಡ ಭಾಷೆಯಲ್ಲೇ ಪ್ರಕಟವಾಗಿರುವ 2022ರ “ನಮ್ಮ ಅನುದಿನದ ಆಹಾರ”ದ ವಾರ್ಷಿಕ ಆವೃತ್ತಿಯೊಂದಿಗೆ ಇಂತಹ ಹಲವು ಭಕ್ತಿಯುತ ದೇವರ ವಾಕ್ಯವನ್ನು ಓದಿ ಅವುಗಳ ಮೇಲೆ ಧ್ಯಾನವನ್ನು ಮಾಡಿ. ಇದರ ಬೆಲೆ ರೂ. 150/- ಆಗಿದ್ದು ಪ್ರತಿದಿನ ದೇವರನ್ನು ನಿಯಮಿತವಾಗಿ ಹುಡುಕಲು ಅತ್ಯಂತ ಸಹಕಾರಿಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನೀವಿದ್ದರೂ, ಆತನೊಂದಿಗೆ ಕಳೆಯುವ ಪವಿತ್ರ ಸಮಯವು ಆತನು ಬಯಸುವ ವ್ಯಕ್ತಿಯಾಗಿ ನಿಮ್ಮನ್ನು ಬದಲಾಯಿಸುತ್ತದೆ ಎಂಬುದನ್ನು ಮಾತ್ರ ಮರೆಯದಿರಿ!