ಇಂದಿನ ವಾಕ್ಯ ಭಾಗ: ಯೆಹೋಶುವ 1:1-9

“ಸಮಯ ಹಾರಿಹೋಯಿತು, ಯುದ್ಧ ಪ್ರಾರಂಭವಾಯಿತು. ”ದಕ್ಷಿಣ ಸೂಡಾನಿನ ಕೆಲಿಕೋ ಜನರ ಬಿಷಪ್‌ ಸೆಮಿ ರೆಗೋ ಬೈಬಲನ್ನು ತಮ್ಮ ಸ್ವಭಾಷೆಗೆ ತರಲು ತನ್ನ ಸಭೆಯ ಸುದೀರ್ಘ ಹೋರಾಟವನ್ನು ಹೀಗೆ ವಿವರಿಸಿದರು. ವಾಸ್ತವವಾಗಿ  ಒಂದು ಮಾತೂ ಸಹ ಕೆಲಿಕೋ ಭಾಷೆಯಲ್ಲಿ ಮುದ್ರಣಗೊಂಡಿರಲಿಲ್ಲ. ದಶಕಗಳ ಹಿಂದೆ, ಬಿಷಪ್‌ ರೆಗೋ ಅವರ ತಾತನು ಧೈರ್ಯದಿಂದ ಬೈಬಲಿನ ಭಾಷಾಂತರ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಯುದ್ಧದ ಗಡಿಬಿಡಿಯಲ್ಲಿ ಪ್ರಯತ್ನವು ಸಾಗಲಿಲ್ಲ. ಆದರೂ ಉತ್ತರ ಉಗಾಂಡಾದ ತಮ್ಮ ನಿರಾಶ್ರಿತ ನೆಲೆಗಳ ಮೇಲೆ ಆದ ಸತತ ಧಾಳಿಯಿಂದಾಗಿಯೂ, ಮತ್ತು ಕಾಂಗೋದ ಪ್ರಜಾ ಪ್ರಭುತ್ವ ಗಣರಾಜ್ಯದಿಂದಾಗಿಯೂ, ಬಿಷಪ್‌ ಹಾಗೂ ಅವರ ವಿಶ್ವಾಸಿಗಳು ಈ ಕೆಲಸವನ್ನು ಮುಂದುವರಿಸುವಂತಾದರು.

ಅವರ ಪರಿಶ್ರಮಕ್ಕೆ ತ್ಯಾಗವಿತ್ತು, ಸುಮಾರು ಮೂರು ದಶಕಗಳಾದ ಮೇಲೆ, ಅಲ್ಲಿನ ನಿರಾಶ್ರಿತರಿಗೆ ಕೆಲಿಕೋ ಭಾಷೆಯಲ್ಲಿ  ಹೊಸಒಡಂಬಡಿಕೆಯು ಸಮಾರಂಭವೊಂದರಲ್ಲಿ ಕೊಡಲ್ಪಟ್ಟಿತು. ”ಕೆಲಿಕೋ ಜನರ ಉದ್ದೇಶವು ಮಾತುಗಳಿಗೆ ಮೀರಿದ್ದು” ಎಂದು ಅಲ್ಲಿನ ಸಲಹೆಗಾರನೊಬ್ಬನು ಹೇಳಿದನು.

ಕೆಲಿಕೋ ಜನರ ಸಮರ್ಪಣೆಯು, ದೇವರು ಯೆಹೋಶೂವನಿಗೆ ಕೊಟ್ಟ ದೃಢತೆಯಾಗಿತ್ತು. “ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ.ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ, ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ” ಎಂದನು (ಯೆಹೋ 1:8). ಅದೇ ರೀತಿಯ ದೃಢತೆಯಿಂದ ಕೆಲಿಕೋ ಜನರು ಭಾಷಾಂತರ ಕೆಲಸವನ್ನು ಮುಂದುವರಿಸಿದರು. ”ಇಂದು ನೀವು ಅವರನ್ನು ಶಿಬಿರಗಳಲ್ಲಿ ನೋಡಿದರೆ, ಸಂತೋಷವನ್ನು ಅವರ ಮುಖಗಳಲ್ಲಿ ಕಾಣುವಿರಿ” ಎಂದು ಒಬ್ಬ ಭಾಷಾಂತರಕಾರನು ಹೇಳಿದನು. ಬೈಬಲ್‌ ವಾಕ್ಯಗಳನ್ನು ಕೆಲಿಕೋ ನ ಜನರಂತೆ ಕೇಳಿ ತಿಳಿದುಕೊಳ್ಳುವಾಗ, “ನಿರೀಕ್ಷೆ ದೊರೆಯುವದು.” ದೇವರ ವಾಕ್ಯದ ಶಕ್ತಿ ಮತ್ತು  ಜ್ಞಾನವನ್ನು ಕಡೆಗಣಿಸದಿರೋಣ.

–ಪಾಟ್ರಿಕ ರೇಸನ್‌

ವಾಕ್ಯವನ್ನು ಶೋಧಿಸಿ ಅದನ್ನು ಗ್ರಹಿಸಲು ನೀನು ಏನು ಮಾಡುತ್ತಿರುವಿ? ಅದನ್ನು ಅರಿತುಕೊಳ್ಳಲು ಮತ್ತು ಆಳವಾಗಿ ತಿಳಿದುಕೊಳ್ಳಲು ನೀನು ಯಾರ ಸಹಾಯವನ್ನು ಎದುರು ನೋಡುವಿ?

ಪ್ರಿಯ ತಂದೆಯೇ, ಬೈಬಲ್‌ ನನ್ನ ಜೀವನಕ್ಕೆ ಬಹು ಪ್ರಾಮುಖ್ಯ, ಅದನ್ನು ಕಲಿಯಲು ಹೆಚ್ಚಿನ ಹಸಿವನ್ನು ಉಂಟುಮಾಡು. ನಿನ್ನ ಜ್ಞಾನವನ್ನು ತಿಳಿಯುವಲ್ಲಿ ಯಾವಾಗಲೂ ಆಸಕ್ತಿಯನ್ನು ಉಂಟುಮಾಡು.

ಕನ್ನಡ ಭಾಷೆಯಲ್ಲೇ ಪ್ರಕಟವಾಗಿರುವ 2022ರ “ನಮ್ಮ ಅನುದಿನದ ಆಹಾರ”ದ ವಾರ್ಷಿಕ ಆವೃತ್ತಿಯೊಂದಿಗೆ ಇಂತಹ ಹಲವು ಭಕ್ತಿಯುತ ದೇವರ ವಾಕ್ಯವನ್ನು ಓದಿ ಅವುಗಳ ಮೇಲೆ ಧ್ಯಾನವನ್ನು ಮಾಡಿ. ಇದರ ಬೆಲೆ ರೂ. 150/- ಆಗಿದ್ದು ಪ್ರತಿದಿನ ದೇವರನ್ನು ನಿಯಮಿತವಾಗಿ ಹುಡುಕಲು ಅತ್ಯಂತ ಸಹಕಾರಿಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನೀವಿದ್ದರೂ, ಆತನೊಂದಿಗೆ ಕಳೆಯುವ ಪವಿತ್ರ ಸಮಯವು ಆತನು ಬಯಸುವ ವ್ಯಕ್ತಿಯಾಗಿ ನಿಮ್ಮನ್ನು ಬದಲಾಯಿಸುತ್ತದೆ ಎಂಬುದನ್ನು ಮಾತ್ರ ಮರೆಯದಿರಿ!