ಇಂದಿನ ವಾಕ್ಯ ಭಾಗ: ಲೂಕ 2:25-35

ಹಾಚಿ ಎ.ಡಾಗ್ಸ್‌ ಎಂಬ ಇಂಗ್ಲೀಷ್‌ ಚಲನಚಿತ್ರದಲ್ಲಿ, ಪ್ರಾಧ್ಯಾಪಕರೊಬ್ಬರು ದಾರಿ ತಪ್ಪಿ ನಾಯಿಮರಿಯೊಂದಿಗೆ ಸ್ನೇಹಬೆಳೆಸಿದರು. ಕೆಲಸದಿಂದ ಮನೆಗೆ ಬರುವಾಗ ನಾಯಿಯು ದಿನಾಲು ನಿಷ್ಟೆಯಿಂದ ಈತನಿಗಾಗಿ ಕಾಯುತ್ತಿತ್ತು. ಒಮ್ಮೆಇವನಿಗೆ ಮಾರಣಾಂತಿಕ ರೋಗ ಉಂಟಾಗಲು ನಾಯಿಮರಿ ತಾಸುಗಟ್ಟಲೆ ಇವನಿಗಾಗಿ ಕಾಯುತ್ತಿತ್ತು. ಹತ್ತು ವರ್ಷಗಳ ಕಾಲ ತನ್ನ ಯಜಮಾನನಿಗಾಗಿ ಪ್ರತಿದಿನ ಕಾಯುತ್ತಿದ್ದರೂ ಸಹ ಒಂಟಿಯಾಗಿಯೇ ಹಿಂದಿರುಗಿ ಬರುತ್ತಿತ್ತು.

ತನ್ನ ಒಡೆಯನ ಬರೋಣವನ್ನು ಸಹನೆಯಿಂದ ಎದುರುನೋಡುತ್ತಿದ್ದ ಸಿಮೆಯೋನನೆಂಬ ವ್ಯಕ್ತಿಯ ಕಥೆಯನ್ನು ಲೂಕನು ಹೇಳುತ್ತಾನೆ (ಲೂಕ 2:25). ಇವನು ಮೆಸ್ಸೀಯನನ್ನು ನೋಡುವವರೆಗೂ ಮರಣ ಹೊಂದುವದಿಲ್ಲವೆಂದು ಪವಿತ್ರಾತ್ಮನು ಇವನಿಗೆ ಹೇಳಿದ್ದನು (ವ. 26).ಹೀಗಾಗಿ ದೇವಜನರಿಗೆ “ರಕ್ಷಣೆ” ಯನ್ನು ಕೊಡುವಾತನಿಗಾಗಿ ಸಿಮೆಯೋನನು ಎದುರುನೋಡುತ್ತಿದ್ದನು (ವ. 30). ಶಿಶುವಾಗಿದ್ದ ಯೇಸುವಿನೊಂದಿಗೆ ಯೋಸೇಫನೂ ಮರಿಯಳೂ ದೇವಾಲಯವನ್ನು ಪ್ರವೇಶಿಸಿದಾಗ, ಈತನೇ ಆ ರಕ್ಷಕನೆಂದು ಪವಿತ್ರಾತ್ಮನು ಸಿಮೆಯೋನನಿಗೆ ತಿಳಿಸಿದನು. ಈಗ ಆ ನಿರೀಕ್ಷೆಯು ಈಡೇರಿತು. ಎಲ್ಲಾ ಜನರಿಗೂ ನಿರೀಕ್ಷೆಯೂ ಆದರಣೆಯೂ ರಕ್ಷಣೆಯೂ ಆಗಿರುವಾತನನ್ನು ತನ್ನ ಕೈಗಳಲ್ಲಿ ಎತ್ತಿಕೊಂಡನು (ವ. 28-32).

ನಾವು ಯಾವುದೋ ನಿರೀಕ್ಷೆಯಲ್ಲಿರುವಾಗ, ಪ್ರವಾದಿ ಯೆಶಾಯನ ಮಾತುಗಳನ್ನು ಮತ್ತೆ ಕೇಳಿಸಿಕೊಳ್ಳುವಾ. “ಯೆಹೋವನ‍ನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು, ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು; ಓಡಿ ದಣಿಯರು, ನಡೆದು ಬಳಲರು.” ಯೇಸುವಿನ ಬರೋಣವನ್ನು ಕಾಯುವ ನಮಗೆ ಅನುದಿನವೂ ಬೇಕಾದ ಬಲವನ್ನು ಆತನು ನೀಡುವನು.

ಮಾರ್ವಿನ್‌ ವಿಲಿಯಮ್ಸ್‌

ನೀನು ದೇವರಿಗಾಗಿ ಕಾದಿದ್ದು ದಣಿದಿದ್ದು ಯಾವಾಗ? ಅಂತಹ ಸವಾಲುಗಳು ಎದುರಾದಾಗ, ನಿನಗೆ ಆದರಣೆ ಸಿಕ್ಕಿದ್ದು ಹೇಗೆ?

ಯೇಸುವೇ. ನಾನು ನಿನಗಾಗಿ ಕಾದಿರುತ್ತೇನೆ, ಕಣ್ಣೀರು, ವೇದನೆ ಮತ್ತು ಏನೂ ಗೊತ್ತಾಗದ ಸಮಯಗಳಲ್ಲಿ ನಾನು ಸೋತುಹೋಗದೆ ನಿನ್ನನ್ನು ಆತುಕೊಳ್ಳುವ ಹಾಗೆ ಮಾಡು.

ಕನ್ನಡ ಭಾಷೆಯಲ್ಲೇ ಪ್ರಕಟವಾಗಿರುವ 2022ರ “ನಮ್ಮ ಅನುದಿನದ ಆಹಾರ”ದ ವಾರ್ಷಿಕ ಆವೃತ್ತಿಯೊಂದಿಗೆ ಇಂತಹ ಹಲವು ಭಕ್ತಿಯುತ ದೇವರ ವಾಕ್ಯವನ್ನು ಓದಿ ಅವುಗಳ ಮೇಲೆ ಧ್ಯಾನವನ್ನು ಮಾಡಿ. ಇದರ ಬೆಲೆ ರೂ. 150/- ಆಗಿದ್ದು ಪ್ರತಿದಿನ ದೇವರನ್ನು ನಿಯಮಿತವಾಗಿ ಹುಡುಕಲು ಅತ್ಯಂತ ಸಹಕಾರಿಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನೀವಿದ್ದರೂ, ಆತನೊಂದಿಗೆ ಕಳೆಯುವ ಪವಿತ್ರ ಸಮಯವು ಆತನು ಬಯಸುವ ವ್ಯಕ್ತಿಯಾಗಿ ನಿಮ್ಮನ್ನು ಬದಲಾಯಿಸುತ್ತದೆ ಎಂಬುದನ್ನು ಮಾತ್ರ ಮರೆಯದಿರಿ!