‘ತಡವಾದರೂ ಅದಕ್ಕೆ ಕಾದಿರು.’ ಹಬಕ್ಕೂಕ 2: 3

ಬಾಂಕೊಕ್‌ ಎಂಬಲ್ಲಿನ ಪ್ರಸಿದ್ಧ ಹೋಟೆಲಿನಲ್ಲಿ ಕಳೆದ 45 ವರ್ಷಗಳಿಂದಲೂ ಒಂದು ಬಗೆಯ ಸೂಪ್‌ ಹಾಗೂ ಸಾರನ್ನು ಬಡಿಸುತ್ತಾರೆ. ಅಲ್ಲಿ ಸಾಕಷ್ಟು ಜನರಿರುತ್ತಾರೆ. ಈ “ಸಮೃದ್ಧ ಅಡುಗೆಯು” ಹಿಂದಿನ ಕಾಲದಿಂದಲೂ ಅಲ್ಲಿ ಪದ್ಧತಿಯಾಗಿ ಬಂದಿದೆ. ಮಿಕ್ಕಿರುವ ಆಹಾರವೂ ಸಹ ಕೆಲ ದಿನಗಳ ಬಳಿಕ ರುಚಿಯನ್ನು ಹೊಂದಿರುತ್ತವೆ. ಇಲ್ಲಿ ನಾನಾ ಬಗೆಯ ಅಡುಗೆಗಳನ್ನು ತಯಾರಿಸುವುದಲ್ಲದೆ, ಥೈಲ್ಯಾಂಡಿನ ರೆಸ್ಟೋರೆಂಟ್‌ಗಳು ರುಚಿಕರವಾದ ಸಾಂಬಾರ್‌ ಗಳಿಗಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಒಳ್ಳೇದನ್ನು ಕಾಣಲು ಕೆಲವು ಸಲ ಕಾಯಬೇಕಾಗುತ್ತದೆ. ಆದರೆ ಮಾನವರ ಸ್ವಭಾವವು ದುಡುಕುತನದಿಂದ ಕೂಡಿದೆ. ”ಎಲ್ಲಿಯವರೆಗೆ”? ಎಂಬುದು ನಮ್ಮ ಪ್ರಶ್ನೆಯಾಗಿದೆ. ಬೈಬಲಿನಲ್ಲಿ ಹಬಕ್ಕೂಕನು ಇದಕ್ಕೆ ಒಂದು ಉದಾಹರಣೆಯಾಗಿದ್ದಾನೆ. “ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೆ ಇರುವಿ? ಹಿಂಸೆ ಹಿಂಸೆ ಎಂದು ಕೂಗಿಕೊಂಡರೂ ರಕ್ಷಿಸದೆ ಇರುವಿ?” (ಹಬ1:2). ಹಬಕ್ಕೂಕ ಎಂದರೆ, (ಸಾಧಿಸು ಎಂದು ಅರ್ಥ), ತನ್ನ (ಯೆಹೂದ) ದೇಶಕ್ಕೆ ದೇವರ ತೀರ್ಪನ್ನು ಪ್ರಕಟಿಸಿದನು. ಬಾಬೇಲಿನ ಕ್ರೂರಿಗಳು ದೇವಜನರಿಗೆ ವಿರೋಧವಾಗಿ ದಂಡೆತ್ತಿ ಬಂದಾಗ, ಇಂಥಾ ಕೆಡುಕರು ಆಕ್ರಮಣ ಮಾಡುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದನು. ಆದರೆ ತನ್ನ ಸಮಯದಲ್ಲಿ ಎಲ್ಲವನ್ನೂ ಸರಿ ಮಾಡುವುದಾಗಿ ದೇವರು ನಿರೀಕ್ಷೆಯನ್ನು ವಾಗ್ದಾನ ಮಾಡಿದನು. ಅದು ಕ್ಲುಪ್ತ ಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ… ತಡವಾದರೂ ಅದಕ್ಕೆ ಕಾದಿರು; ಬಂದೇ ಬರುವದು” (2:3).

ಬಾಬೇಲಿನ ಸೆರೆವಾಸವು ಎಪ್ಪತ್ತು ವರ್ಷವಿತ್ತು. ಅದು ಮಾನವನಿಗೆ ದೊಡ್ಡ ಅವಧಿಯೇ, ಆದರೆ ದೇವರು ತನ್ನ ಮಾತಿಗೆ ನಂಬಿಗಸ್ತನಾಗಿಯೇ ಇರುವನು.

ಒಳ್ಳೆಯ ಆಶೀರ್ವಾದಗಳು ಬೇಗನೆ ಬರುವದಿಲ್ಲ, ಆದರೂ ಅದಕ್ಕಾಗಿ ಕಾದಿರು, ಆತನು ಪ್ರತೀ ಆಶೀರ್ವಾದವನ್ನೂ ತನ್ನ ಪರಿಪೂರ್ಣವಾದ ಜ್ಞಾನದಿಂದ ಇಟ್ಟಿರುತ್ತಾನೆ. ಕಾದಿರುವುದು ಒಳ್ಳೇಯದೇ.

ಜೇಮ್ಸ್‌ ಬ್ಯಾಂಕ್ಸ್‌

ನೀನು ಯಾವ ಆಶೀರ್ವಾದಕ್ಕಾಗಿ ದೇವರಿಗಾಗಿ ಕಾಯುತ್ತಿರುವಿ? ಆಶೀರ್ವಾದಗಳು ಬರುವಾಗ ಆತನನ್ನು ಆರಾಧಿಸಲು  ಹೇಗೆ ಸಿದ್ಧನಾಗುತ್ತಿರುವಿ?

ತಂದೆಯೇ, ನಿನ್ನ ದಯೆ ಹಾಗೂ ನಂಬಿಗಸ್ತಿಕೆಗಾಗಿ ಮತ್ತು ನನಗೆ ಕೊಟ್ಟ ಆಶೀರ್ವಾದಗಳಿಗಾಗಿ ನಿನಗೆ ಸ್ತೋತ್ರ. ಯಾವಾಗಲೂ ನಿನ್ನನ್ನೇ ಎದುರು ನೋಡುವಂತೆ ನನಗೆ ಸಹಾಯ ಮಾಡು.

ಕನ್ನಡ ಭಾಷೆಯಲ್ಲೇ ಪ್ರಕಟವಾಗಿರುವ 2022ರ “ನಮ್ಮ ಅನುದಿನದ ಆಹಾರ”ದ ವಾರ್ಷಿಕ ಆವೃತ್ತಿಯೊಂದಿಗೆ ಇಂತಹ ಹಲವು ಭಕ್ತಿಯುತ ದೇವರ ವಾಕ್ಯವನ್ನು ಓದಿ ಅವುಗಳ ಮೇಲೆ ಧ್ಯಾನವನ್ನು ಮಾಡಿ. ಇದರ ಬೆಲೆ ರೂ. 150/- ಆಗಿದ್ದು ಪ್ರತಿದಿನ ದೇವರನ್ನು ನಿಯಮಿತವಾಗಿ ಹುಡುಕಲು ಅತ್ಯಂತ ಸಹಕಾರಿಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನೀವಿದ್ದರೂ, ಆತನೊಂದಿಗೆ ಕಳೆಯುವ ಪವಿತ್ರ ಸಮಯವು ಆತನು ಬಯಸುವ ವ್ಯಕ್ತಿಯಾಗಿ ನಿಮ್ಮನ್ನು ಬದಲಾಯಿಸುತ್ತದೆ ಎಂಬುದನ್ನು ಮಾತ್ರ ಮರೆಯದಿರಿ!