ಬುಧವಾರ, ಜನವರಿ 1

ಒಂದು ವರುಷದಲ್ಲಿ ಸತ್ಯವೇದ

ಆದಿಕಾಂಡ 1–3; ಮತ್ತಾಯ 1

ಈ ದಿನದ ಸತ್ಯವೇದ ಓದುವಿಕೆ

ಈ ದಿನದ ಸತ್ಯವೇದ ಓದುವಿಕೆಗಾಗಿ ಎಜ್ರನು 1:1–11

 

ಮೂಲ ವಚನ

ದೇವಪ್ರೇರಣೆಗೆ ಒಳಗಾದವರೆಲ್ಲರೂ ಯೆರೂಸಲೇಮಿನಲ್ಲಿ ಯೆಹೋವನಿಗೋಸ್ಕರ ಆಲಯಕಟ್ಟುವದಕ್ಕಾಗಿ ಹೊರಟುಹೋದರು. ಎಜ್ರನು 1:5

ಕ್ರಿಸ್ಮಸ್ ಹಬ್ಬ ಮುಗಿದ ಮೇಲೆ ಡಿಸೆಂಬರ್ ಕೊನೆಯಲ್ಲಿ, ಸಾಮಾನ್ಯವಾಗಿ ನನ್ನ ಯೋಚನೆ ಮುಂದೆ ಬರುವ ವರುಷಕ್ಕೆ ತಿರುಗುತ್ತದೆ. ನನ್ನ ಮಕ್ಕಳು ಶಾಲೆಯಿಂದ ಹೊರಗೆ ಬಂದ ಮೇಲೆ ಮತ್ತು ನನ್ನ ದೈನಂದಿನ ಕಾರ್ಯಗಳು ನಿಧಾನವಾದಾಗ, ನಾನು, ಕಳೆದ ವರುಷವು ನನ್ನನ್ನು ಎಲ್ಲಿಗೆ ತಂದಿದೆ ಎಂದು ಆಲೋಚನೆ ಮಾಡುತ್ತೇನೆ ಮತ್ತು ಮುಂದಿನದು ನನ್ನನು ಎಲ್ಲಿಗೆ ಕರೆದ್ಯೂಯುತ್ತದೆ ಎಂದು ನಿರೀಕ್ಷಿಸುತ್ತೇನೆ. ಆ ಆಲೋಚನೆಗಳು ಕೆಲವೊಮ್ಮೆ ನಾನು ಮಾಡಿದ ತಪ್ಪುಗಳಿಗಾಗಿ ನೋವಿನಿಂದ ಮತ್ತು ಪಶ್ಚಾತ್ತಾಪದಿಂದ ಬರುವವು. ಆದರೂ ಹೊಸ ವರುಷ ಆರಂಭಿಸುವ ವಿಶಾಲ ದೃಷ್ಟಿಯು ನನ್ನನ್ನು ವಿಶ್ವಾಸ ಮತ್ತು ನಿರೀರಿಕ್ಷೆಯಿಂದ ತುಂಬಿಸುವದು. ಕಳೆದ ವರುಷ ಏನೇ ಆಗಿರಲಿ, ನನಗೆ ತಿರುಗಿ ಹೊಸದಾಗಿ ಆರಂಭಿಸಲು ಅವಕಾಶ ಇದೆ ಎಂದು ನನಗೆ ಅನ್ನಿಸುತ್ತದೆ.

ಹೊಸದಾಗಿ ಆರಂಭಿಸುವ ನನ್ನ ನಿರೀಕ್ಷಣೆಯು ಪಾರಸಿಯ ಅರಸನಾದ ಕೊರೇಷನು, ಬಾಬೇಲಿನಲ್ಲಿ ಎಪ್ಪತ್ತು ವರುಷ ಸೆರೆಯಲ್ಲಿ ಇದ್ದ ಇಸ್ರಾಯೇಲ್ಯರನ್ನು ತಿರುಗಿ ತಮ್ಮ ಸ್ವದೇಶವಾದ ಯೆಹೂದ ದೇಶಕ್ಕೆ ಹೋಗಲು ಬಿಡುಗಡೆ ಮಾಡಿದಾಗ ಅವರಿಗೆ ಅನ್ನಿಸಿದ ನಿರೀಕ್ಷೆಯ ಭಾವನೆ ಹೋಲಿಕೆಯಾಗುತ್ತದೆ. ಹಿಂದಿನ ಅರಸನಾದ, ನೆಬೂಕದ್ನೆಚ್ಚರನು, ಇಸ್ರಾಯೇಲ್ಯರನ್ನು ಅವರ ಸ್ವದೇಶದಿಂದ ಹೊರಗಟ್ಟಿದನು. ಆದರೆ ದೇವರು ಕೊರೇಷನಿಗೆ ಯೆರೂಸಲೇಮಿನಲ್ಲಿ ದೇವರ ಆಲಯವನ್ನು ತಿರುಗಿ ಕಟ್ಟಲು ಸೆರೆಯಲ್ಲಿ ಇದ್ದವರನ್ನು ಮನೆಗೆ ಕಳುಹಿಸಲು ಪ್ರೇರೆಪಿಸಿದನು. (ಎಜ್ರನು 1:2-3). ಕೊರೇಷನು ಅವರಿಗೆ ಆಲಯದಿಂದ ತೆಗೆದುಕೊಂಡ ಬೆಳ್ಳಿಬಂಗಾರ ಮತ್ತು ಸರಕುಗಳನ್ನು ಸಹ ತಿರುಗಿ ಕೊಟ್ಟನು. ದೇವರು ಆಯ್ದುಕೊಂಡ ಜನರಾಗಿ, ಅವರ ಪಾಪಗಳ ಪರಿಣಾಮವಾಗಿ ಬಾಬೇಲಿನಲ್ಲಿ ಬಹಳ ಕಾಲ ಕಷ್ಟವನ್ನು

ನಮ್ಮ ಹಿಂದಿನ ಜೀವಿತ ಏನೇ ಆಗಿರಲಿ, ನಮ್ಮ ಪಾಪಗಳನ್ನು ನಾವು ಅರಿಕೆ ಮಾಡಿದಾಗ, ದೇವರು ನಮ್ಮನ್ನು ಕ್ಷಮಿಸುತ್ತಾನೆ ಮತ್ತು ಹೊಸ ಆರಂಭವನ್ನು ಕೊಡುತ್ತಾನೆ. ನಿರೀಕ್ಷೆಗಾಗಿ ಎಂತಹ ದೊಡ್ಡ ಕಾರಣ!

 

ಕರ್ಸ್ಟನ್ ಹೊಮಬರ್ಗ್

ದೇವರ ಕೃಪೆ ನಮಗೆ ಹೊಸ ಆರಂಭವನ್ನು ಕೊಡುತ್ತದೆ.

ದೇವರ ಕೃಪೆ ನಮಗೆ ಹೊಸ ಆರಂಭವನ್ನು ಕೊಡುತ್ತದೆ.