ಇಂದಿನ ವಾಕ್ಯ ಭಾಗ: ಕೀರ್ತನೆ 56: 3-11
ಸಭೆಯ ಸೇವೆ ಮಾಡಲು ವಾರೆನ್ ಒಂದು ಚಿಕ್ಕ ನಗರಕ್ಕೆ ಹೋದನು. ಅಲ್ಲಿ ಸೇವೆ ಮಾಡುತ್ತಿರುವಾಗ, ಒಬ್ಬನು ಪರಿವರ್ತನೆಗೊಂಡು ಸ್ವಲ್ಪ ಜಯ ಸಿಕ್ಕಿದಂತೆ ಕಾಣಿಸಿತು. ಇದೊಂದು ಕಥೆಯಂತೆ ಬಿಂಬಿಸಿ ವಾರನ್ನನ್ನು ಭಯಾನಕ ತಪ್ಪಿನಲ್ಲಿ ಸಿಲುಕಿಸುವಂತೆ, ಒಬ್ಬನು ಇದನ್ನು ಸ್ಥಳೀಯ ಪತ್ರಿಕೆಯಲ್ಲಿ ಅಕ್ಕಪಕ್ಕದವರಿಗೆಲ್ಲಾ ಗೊತ್ತಾಗುವಂತೆ ಅಚ್ಚು ಹಾಕಿಸಿ ಮುದ್ರಿಸಿದನು. ವಾರೆನ್ ಮತ್ತು ಇವನ ಪತ್ನಿ ಈ ಕುರಿತು ಬಹುವಾಗಿ ಪ್ರಾರ್ಥಿಸಿದರು. ಒಂದುವೇಳೆ ಸುಳ್ಳನ್ನು ಜನರು ನಂಬಿದರೆ, ಅವರ ಜೀವನವು ಅದರಲ್ಲೇ ಕೊನೆಗೊಳ್ಳುತ್ತಿತ್ತು.
ರಾಜನಾದ ದಾವೀದನು ಅಂತಹ ಅನುಭವವನ್ನೇ ಅನುಭವಿಸಬೇಕಾಗಿತ್ತು. ಅವನ ಶತ್ರುವು ಅವನನ್ನು ದೂಷಿಸಿದನು, ”ನನ್ನ ಮಾತುಗಳಿಗೆ ಅಪಾರ್ಥ ಮಾಡುತ್ತಾರೆ, ಅವರು ಬಗೆಯುವದೆಲ್ಲಾ ನನಗೆ ಕೇಡೇ (ಕೀರ್ತನೆ 56:5), ಅವರು ಒಟ್ಟುಗೂಡಿ ಬಂದದ್ದು ಅವನ ಭಯಕ್ಕೂ ಕಣ್ಣೀರಿಗೂ ಕಾರಣವಾಯಿತು (ವ. 8). ಆದರೆ ಯುದ್ಧದ ನಡುವೆಯೂ, ಅವನು ಬಲವಾಗಿ ಹೀಗೆ ಮೊರೆಯಿಟ್ಟನು “ನನಗೆ ಹೆದರಿಕೆಯುಂಟಾದಾಗ ನಿನ್ನನ್ನೇ
ಆಶ್ರಯಿಸಿಕೊಳ್ಳುವೆನು, ನರಪ್ರಾಣಿಗಳು ನನಗೆ ಮಾಡುವದೇನು? (ವ. 3,4).
ದಾವೀದನ ಪ್ರಾರ್ಥನೆಯು ಇಂದು ನಮಗೂ ಮಾದರಿಯಾಗಿದೆ. ನಾವು-ಭಯದಲ್ಲಿರುವಾಗ, ಜನರು ನಮ್ಮನ್ನು ದೂರುವಾಗ, ನಾವು ದೇವರ ಕಡೆಗೆ ತಿರುಗಿಕೊಳ್ಳುತ್ತೇವೆ. ನಾನು ನಿನ್ನನ್ನು ನಂಬುತ್ತೇನೆ ಎನ್ನುತ್ತಾ -ನಾವು ನಮ್ಮ ಹೋರಾಟಗಳನ್ನು ದೇವರ ಬಲವಾದ ಕೈಗಳಿಗೆ ಕೊಡುತ್ತೇವೆ. ನರಪ್ರಾಣಿಗಳು ನನಗೆ ಮಾಡುವದೇನು?- ಪರಿಸ್ಥಿತಿಯನ್ನು ಆತನೊಂದಿಗೆ ಎದುರಿಸುತ್ತಾ ನಮ್ಮ ವಿರೋಧಿಗಳಿಗಿರುವ ಶಕ್ತಿಯು ದೊಡ್ಡದಲ್ಲವೆಂದು ತಿಳಿದಿರುತ್ತೇವೆ.
ವಾರನ್ನ ವಿರೋಧವಾಗಿ ಕಟ್ಟಲಾದ ಕಥೆಯು ಸುಳ್ಳೆಂದು ಪತ್ರಿಕೆಯವರು ಕಡೆಗಣಿಸಿದರು. ಕಾರಣಾಂತರಗಳಿಂದಾಗಿ ಆ ಪತ್ರಿಕೆಗಳನ್ನು ಹಂಚಲು ಆಗಲಿಲ್ಲ, ಇಂದು ನಿನಗಿರುವ ಹೋರಾಟವೇನು? ದೇವರಿಗೆ ಮೊರೆಯಿಡು. ಆತನು ನಿನ್ನೊಂದಿಗೆ ಇದ್ದು ಹೋರಾಡುವನು.
–ಶೇರಿಡನ್ ವಾಯ್ಸೆ
ನಿನಗಿಂದು ಎಂಥಹ ಭಯ ಉಂಟು? ಅವನ್ನು ಜಯಿಸಲು ದಾವೀದನ ಪ್ರಾರ್ಥನೆಯು ಹೇಗೆ ಸಹಾಯಕರವಾಗಿದೆ?
ಪ್ರೀತಿಯ ದೇವರೇ, ನನಗೆ ಭಯವಿದೆ- ಮತ್ತು ನಾನು ನಿನ್ನನ್ನು ನಂಬುತ್ತೇನೆ. ನೀನು ನನಗಾಗಿ ಹೋರಾಡುವಾಗ ನರಪ್ರಾಣಿಗಳು ನನಗೆ ಮಾಡುವುದೇನು? ಮುಂದೆ ನೀನು ನನಗೆ ಕೊಡುವ ಜಯಕ್ಕಾಗಿ ನಿನಗೆ ಸ್ತೋತ್ರ
ಕನ್ನಡ ಭಾಷೆಯಲ್ಲೇ ಪ್ರಕಟವಾಗಿರುವ 2022ರ “ನಮ್ಮ ಅನುದಿನದ ಆಹಾರ”ದ ವಾರ್ಷಿಕ ಆವೃತ್ತಿಯೊಂದಿಗೆ ಇಂತಹ ಹಲವು ಭಕ್ತಿಯುತ ದೇವರ ವಾಕ್ಯವನ್ನು ಓದಿ ಅವುಗಳ ಮೇಲೆ ಧ್ಯಾನವನ್ನು ಮಾಡಿ. ಇದರ ಬೆಲೆ ರೂ. 150/- ಆಗಿದ್ದು ಪ್ರತಿದಿನ ದೇವರನ್ನು ನಿಯಮಿತವಾಗಿ ಹುಡುಕಲು ಅತ್ಯಂತ ಸಹಕಾರಿಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನೀವಿದ್ದರೂ, ಆತನೊಂದಿಗೆ ಕಳೆಯುವ ಪವಿತ್ರ ಸಮಯವು ಆತನು ಬಯಸುವ ವ್ಯಕ್ತಿಯಾಗಿ ನಿಮ್ಮನ್ನು ಬದಲಾಯಿಸುತ್ತದೆ ಎಂಬುದನ್ನು ಮಾತ್ರ ಮರೆಯದಿರಿ!