ಇಂದಿನ ವಾಕ್ಯ ಭಾಗ: ಯೋಹಾನ 12:25-33, 35-36
ಭೀಕರ ಚಂಡಮಾರುತ ಎಂಬ ಹವಾಮಾನ ಮುನ್ಸೂಚನೆಯಾಗುತ್ತದೆ. ವಾತಾವರಣದ ಒತ್ತಡವು ಕಡಿಮೆ ಆದಾಗ ಮತ್ತು ಚಳಿಗಾಲದ ಚಂಡಮಾರುತವು ತೀವ್ರವಾದಾಗ ಹಾಗಾಗುತ್ತದೆ. ಕತ್ತಲಾಗುವಾಗ ಗಾಳಿಯ ರಭಸವಾದ ಧೂಳಿನಿಂದಾಗಿ, ವಿಮಾನಕ್ಕೆ ಹೆದ್ದಾರಿಯು ಕಾಣದಂತಾದಾಗ, ಒಂದುವೇಳೆ ನಿಮ್ಮ ಮಗಳನ್ನು ಎದುರು ನೋಡುತ್ತಿರುವ ನೀವು (ಹೆದ್ದಾರಿಯಲ್ಲಿ ಸಿಲುಕಿದರೆ) ಮಾಡಬೇಕಾದುದನ್ನು ಮಾಡಲು ಸಿದ್ದರಾಗುತ್ತೀರಿ. ನೀರು ಬಟ್ಟೆ ಇವುಗಳನ್ನು ಜೊತೆಯಲ್ಲಿ ಒಯ್ಯುತ್ತೀರಿ. ಇಂತಹ ಸಂದರ್ಭಗಳಲ್ಲಿ ಸಾವಕಾಶದಿಂದ ಚಲಿಸುತ್ತಾ ಯಾವಾಗಲೂ ಪ್ರಾರ್ಥಿಸಿರಿ. ಮುಖ್ಯವಾಗಿ (ಹೆಡ್ ಲೈಟ್) ಬೆಳಕನ್ನು ನಂಬಿರಿ. ಅನೇಕ ಸಲ ನೀವು ಅಸಾಧ್ಯವಾದವುಗಳನ್ನು ಸಾಧಿಸುವಿರಿ.
ಯೇಸುವು ತನ್ನ ಮರಣವೂ ಒಳಗೊಂಡು ಮುಂದೆ ಆಗುವ ಚಂಡಮಾರುತದ ಬಗ್ಗೆ ಸೂಚಿಸಿರುವನು (ಯೋಹಾನ 12:31-33). ಇದು, ಆತನ ಶಿಷ್ಯರು ಆತನಿಗೆ ನಂಬಿಗಸ್ತರಾಗಿ ಸೇವೆ ಮಾಡುವ ಹಾಗೆ ಮಾಡುವದು (ವ. 36). ಮುಂದೆ ಏನೂ ಕಾಣಿಸದ ಹಾಗೆ ಕತ್ತಲು ಆವರಿಸುತ್ತದೆ. ಹೀಗಾಗಿ ಅವರು ಏನು ಮಾಡಬೇಕೆಂದು ಯೇಸು ಹೇಳಿದನು? ಬೆಳಕನ್ನು ನಂಬಿರಿ, ಅಂದನು. ಆತನಿಗೆ ನಂಬಿಗಸ್ತರಾಗಿ ಮುಂದೆ ಸಾಗಲು ಅದೊಂದೇ ಮಾಡುವುದು (ವ. 36).
ಇನ್ನು ಸ್ವಲ್ಪ ಕಾಲ ಮಾತ್ರವೇ ಅವರೊಂದಿಗಿರುವನು. ಆದರೆ ವಿಶ್ವಾಸಿಗಳಾದ ನಮಗೆ ಬೆಳಕು ತೋರಿಸಲು ಆತ್ಮನು ಸದಾ ನಮ್ಮೊಂದಿಗಿರುವನು. ನಮಗೂ ಕೆಲವು ಸಲ ಬೆಳಕು ಕಾಣಿಸುವುದಿಲ್ಲ, ಆದರೆ ಬೆಳಕನ್ನು ನಂಬುವುದರಿಂದ ನಾವು ಮುಂದೆ ಸಾಗಬಹುದು.
ಜಾನ್ ಬ್ಲೇಸ್
ಈ ಹಿಂದೆ ನಿನಗೆ ಎಂತಹ ಕತ್ತಲು ಆವರಿಸಿತ್ತು? ಮುಂದೆ ಸಾಗುವ ಹಾಗೆ ಬೆಳಕಾದ ಯೇಸು ಹೇಗೆ ಸಹಾಯ ಮಾಡಿದನು?
ಯೇಸುವೇ, ನಮ್ಮ ಕತ್ತಲಲ್ಲಿ ನೀನು ಬೆಳಕಾಗಿರುವುದಕ್ಕಾಗಿ ನನಗೆ ಸ್ತೋತ್ರ. ನಂಬಿಕೆಯಿಂದ ಸಾಗಲು ಸಹಾಯ ಮಾಡು.
ಕನ್ನಡ ಭಾಷೆಯಲ್ಲೇ ಪ್ರಕಟವಾಗಿರುವ 2022ರ “ನಮ್ಮ ಅನುದಿನದ ಆಹಾರ”ದ ವಾರ್ಷಿಕ ಆವೃತ್ತಿಯೊಂದಿಗೆ ಇಂತಹ ಹಲವು ಭಕ್ತಿಯುತ ದೇವರ ವಾಕ್ಯವನ್ನು ಓದಿ ಅವುಗಳ ಮೇಲೆ ಧ್ಯಾನವನ್ನು ಮಾಡಿ. ಇದರ ಬೆಲೆ ರೂ. 150/- ಆಗಿದ್ದು ಪ್ರತಿದಿನ ದೇವರನ್ನು ನಿಯಮಿತವಾಗಿ ಹುಡುಕಲು ಅತ್ಯಂತ ಸಹಕಾರಿಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನೀವಿದ್ದರೂ, ಆತನೊಂದಿಗೆ ಕಳೆಯುವ ಪವಿತ್ರ ಸಮಯವು ಆತನು ಬಯಸುವ ವ್ಯಕ್ತಿಯಾಗಿ ನಿಮ್ಮನ್ನು ಬದಲಾಯಿಸುತ್ತದೆ ಎಂಬುದನ್ನು ಮಾತ್ರ ಮರೆಯದಿರಿ!