(ಗೊಲ್ಯಾತನು) ದಾವೀದನನ್ನು ತಿರಸ್ಕಾರದಿಂದ ನೋಡಿದನು. 1 ಸಮುವೇಲ17:42
ಬೇಬಿ ಸೈಬೀ 23 ವಾರಗಳಲ್ಲಿ ಕೇವಲ 245 ಗ್ರಾಮ್ ತೂಕದವಳಾಗಿ ದಿನ ತುಂಬದೆ ಹುಟ್ಟಿದಳು. ಕೇವಲ ಒಂದು ತಾಸು ಮಾತ್ರ ಮಗುವು ಬದುಕಿ ಉಳಿಯುವದೆಂದು ವೈದ್ಯರು ಪೋಷಕರಿಗೆ ತಿಳಿಸಿದರು. ಆದರೂ ಮಗುವು ಹೋರಾಡುತ್ತಿತ್ತು. ಮಗುವಿಗೆ ಲಗತ್ತಿಸಿದ್ದ ಚೀಟಿಯಲ್ಲಿ “ಚಿಕ್ಕದು ಆದರೆ ಪ್ರಬಲವಾದದ್ದು” ಎಂದು ಬರೆದಿತ್ತು.ಆಸ್ಪತ್ರೆಯಲ್ಲಿ ಐದು ತಿಂಗಳಾದ ಬಳಿಕ ಮಗುವನ್ನು ಆರೋಗ್ಯಕರವಾಗಿ ಅದ್ಬುತವಾಗಿ 2.26 kg ತೂಕವುಳ್ಳದ್ದಾಗಿ ಕರೆದೊಯ್ಯಲಾಯಿತು. ಹೀಗಾಗಿ ಜಗತ್ತಿನಲ್ಲಿಯೇ ಅತೀ ಚಿಕ್ಕದಾದ ಮಗು ಚೇತರಿಕೆ ಕಂಡಿತು ಎಂಬ ವಿಶ್ವದಾಖಲೆಯೇ ಆಯಿತು.
ಇಂತಹ ಅದ್ಬುತಗಳಾಗುವಾಗ ಈ ರೀತಿಯ ಕಥೆಗಳು ಬಲವಾಗಿ ಪ್ರಭಾವ ಬೀರುತ್ತವೆ. ಈ ರೀತಿಯ ಕಥೆಗಳಲ್ಲಿ ದಾವೀದನ ಕಥೆಯೂ ಒಂದು. ಕುರುಬನಾಗಿದ್ದ ಅವನು- ರಣವೀರನೂ ದೇವರನ್ನು ದೂಷಿಸಿ ಇಸ್ರಾಯೇಲ್ಯರನ್ನು ಬೆದರಿಸುತ್ತಿದ್ದ ಗೊಲ್ಯಾತನೊಂದಿಗೆ ಸೆಣಸಾಡಲು ಮುಂದಾದನು ಅರಸನಾದ ಸೌಲನೆದುರು ದಾವೀದನು ಪರಿಹಾಸ್ಯಕ್ಕೊಳಗಾದನು. ”ನೀನು ಅವನೊಡನೆ ಕಾದಾಡಲಾರಿ, ನೀನು ಇನ್ನೂ ಹುಡುಗನು ಅವನಾದರೋ ಚಿಕ್ಕಂದಿನಿಂದಲೇ ಯುದ್ಧವೀರನು ಎಂದನು.(1ಸಮುವೇಲ 17:33). ಹುಡುಗನಾದ ದಾವೀದನು ಯುದ್ಧಕ್ಕೆ ಮುಂದಾದಾಗ ಗೊಲ್ಯಾತನು ದಾವೀದನನ್ನು ತಿರಸ್ಕಾರದಿಂದ ನೋಡಿದನು (ವ. 42). ಆದರೂ ದಾವೀದನೊಬ್ಬನೇ ಯುದ್ಧ ಮಾಡಲು ಮುಂದಾಗಲಿಲ್ಲ. “ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ” ಮುಂದಾದನು. (ವ. 45) ಸಂಜೆಯಾದಾಗ, ಸತ್ತ ಗೊಲ್ಯಾತನ ಮೇಲೆ ನಿಂತನು.
ಎಂಥಹ ದೊಡ್ಡ ಸಮಸ್ಯೆಯಾದರೂ, ದೇವರು ನಮ್ಮೊಂದಿಗೆ ಇರುವಾಗ ಭಯವಿಲ್ಲ.ಆತನ ಬಲದಿಂದ, ನಾವೂ ಸಹ ಪ್ರಬಲರಾಗುತ್ತೇವೆ.
–ವಿನ್ ಕೋಲಿಯರ್
ಕನ್ನಡ ಭಾಷೆಯಲ್ಲೇ ಪ್ರಕಟವಾಗಿರುವ 2022ರ “ನಮ್ಮ ಅನುದಿನದ ಆಹಾರ”ದ ವಾರ್ಷಿಕ ಆವೃತ್ತಿಯೊಂದಿಗೆ ಇಂತಹ ಹಲವು ಭಕ್ತಿಯುತ ದೇವರ ವಾಕ್ಯವನ್ನು ಓದಿ ಅವುಗಳ ಮೇಲೆ ಧ್ಯಾನವನ್ನು ಮಾಡಿ. ಇದರ ಬೆಲೆ ರೂ. 150/- ಆಗಿದ್ದು ಪ್ರತಿದಿನ ದೇವರನ್ನು ನಿಯಮಿತವಾಗಿ ಹುಡುಕಲು ಅತ್ಯಂತ ಸಹಕಾರಿಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನೀವಿದ್ದರೂ, ಆತನೊಂದಿಗೆ ಕಳೆಯುವ ಪವಿತ್ರ ಸಮಯವು ಆತನು ಬಯಸುವ ವ್ಯಕ್ತಿಯಾಗಿ ನಿಮ್ಮನ್ನು ಬದಲಾಯಿಸುತ್ತದೆ ಎಂಬುದನ್ನು ಮಾತ್ರ ಮರೆಯದಿರಿ! ನಿಮ್ಮ ಪ್ರತಿಗಳಿಗಾಗಿ ಈಗಲೇ ಕಾಯ್ದಿರಿಸಿ