ಇಂದಿನ ವಾಕ್ಯ ಭಾಗ: ಧರ್ಮೋಪದೇಶಕಾಂಡ 5:12-15

ನನ್ನ ಮನೆಯ ಬಳಿಯಲ್ಲಿ  ಮನೆಯನ್ನು ಅಭಿವೃದ್ಧಿ ಮಾಡುವ ಅಂಗಡಿ ಇದೆ. ಅದರ ಒಂದು ಇಲಾಖೆಯಲ್ಲಿ ಒಂದು ದೊಡ್ಡದಾದ ಹಸಿರು ಬಟನ್‌ ಇದೆ. ಸಹಾಯಕರು ಯಾರೂ ಇಲ್ಲದಿದ್ದರೆ ನೀನು ಅದನ್ನು ಒತ್ತಬಹುದು. ಅದು ಸಮಯ ಸೂಚಿಸುತ್ತಾ ಆರಂಭಗೊಳ್ಳುತ್ತದೆ.  ಒಂದು ನಿಮಿಷ ಮೀರಿ ನೀನು ಒತ್ತಿದರೆ, ನಿನಗೆ ವಸ್ತುಗಳಲ್ಲಿ ರಿಯಾಯಿತಿ ಸಿಗುತ್ತದೆ.

ಈ ಕತೆಯಂತೆ ನಾವು ಖರೀದಿಸುವವರಾಗಿ ಎಲ್ಲವೂ ಬೇಗನೆ ಆಗಬೇಕೆಂದು ಬಯಸುತ್ತೇವೆ. ಆದರೆ ಬೇಗನೆ ಎಲ್ಲವೂ ಆಗಬೇಕಾಗಿದ್ದರೆ, ಅದಕ್ಕಾಗಿ ನಾವು ಹೆಚ್ಚಾಗಿ ಪಾವತಿಸಬೇಕಾಗಿರುತ್ತದೆ. ನಮ್ಮಲ್ಲಿ ಅನೇಕರು ಹೆಚ್ಚು ಸಮಯ ಕೆಲಸ ಮಾಡುತ್ತಲೇ ಇರುತ್ತೇವೆ. ಇಮೇಲ್‌ಗಳನ್ನು ಪದೇ ಪದೇ ಪರಿಶೀಲಿಸುತ್ತಾ, ಮರಣಕರವಾದ ತೊಡಕಿನಲ್ಲಿ ಸಿಲುಕಿಕೊಳ್ಳುತ್ತೇವೆ. ಖರೀದಿಸುವವರಿಗೆ ಸೂಕ್ತವಾದ ಸೇವೆ ಒದಗಿಸುವಲ್ಲಿ ಸಮಾಜದ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ತ್ವರೆಪಡುತ್ತಿದ್ದಾರೆ.

ಸಬ್ಬತ್ತನ್ನು ಆಚರಿಸಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದಾಗ, ಅದಕ್ಕೆ ಮುಖ್ಯವಾದ ಕಾರಣವಿತ್ತು. “ನೀವು ಐಗಪ್ತ ದೇಶದಲ್ಲಿದ್ದುದನ್ನು ನೆನಪುಮಾಡಿಕೊಳ್ಳಿರಿ” (ಧರ್ಮೋ 5:15). ಅಲ್ಲಿ ಅವರು ಫರೋಹನ ದಾಸತ್ವದಲ್ಲಿ ಎಡೆಬಿಡದೆ ನಿಟ್ಟುಸಿರು ಬಿಡುವ ಸ್ಥಿತಿಯಲ್ಲಿ ಕೆಲಸ ಮಾಡಬೇಕಾಗಿತ್ತು (ವಿಮೋ 5:6-9). ಈಗ ಅವರ ದಾಸತ್ವದಿಂದ ಬಿಡುಗಡೆ ಹೊಂದಿದವರಾಗಿ ಅವರು ಇಡೀ ದಿನವನ್ನು ದೇವರಿಗಾಗಿ ಪ್ರತಿಷ್ಟಿಸಬೇಕಾಗಿದೆ (ಧರ್ಮೋ 5:14). ಈಗ ದೇವರ ಅಧೀನದಲ್ಲಿದ್ದುಕೊಂಡು ನಿಟ್ಟುಸಿರು ಬಿಡುವ  ಸ್ಥಿತಿಯು ಅವರಿಗಿಲ್ಲ.

ನೀನು ಎಷ್ಟು ಸಲ ಸತತವಾಗಿ ಕೆಲಸ ಮಾಡುತ್ತಾ, ಇಲ್ಲವೆ ನಿನಗಾಗಿ ಕಾದಿರುವ ಜನರ ಬಗ್ಗೆ ಅಸಹನೆ ತೋರಿಸಿರುವಿ? ನಾವು ಪರಸ್ಪರ ವಿಶ್ರಾಂತಿಗೆ ಕಾರಣರಾಗಿರೋಣ. ಗಡಿಬಿಡಿಯಿಂದ ಕೆಲಸ ಮಾಡುವುದು ಫರೋಹನ ಕ್ರಮ, ಅದು ದೇವರ ಕ್ರಮವಲ್ಲ.

ಶೆರಿಡಾನ್‌ ವಾಯ್ಸೆ

ಹೆಚ್ಚಾಗಿ ಕೆಲಸ ಮಾಡುವ ಒತ್ತಡವು ಬಂದಾಗ ಅದನ್ನು ಹೇಗೆ ನಿಭಾಯಿಸುವಿ? ನಿನಗಾಗಿ ಕಾದಿರುವ ಜನರ ವಿಷಯದಲ್ಲಿ ನೀನು ತಾಳ್ಮೆಯಿಂದ ಹೇಗೆ ವರ್ತಿಸುವಿ?

ಸಬ್ಬತ್ತಿನ ಒಡೆಯನೇ, ನನಗಾಗಿ ಸಬ್ಬತ್ತನ್ನು ನೇಮಿಸಿರುವದಕ್ಕಾಗಿ ನಿನಗೆ ಸ್ತೋತ್ರ.

ಕನ್ನಡ ಭಾಷೆಯಲ್ಲೇ ಪ್ರಕಟವಾಗಿರುವ 2022ರ “ನಮ್ಮ ಅನುದಿನದ ಆಹಾರ”ದ ವಾರ್ಷಿಕ ಆವೃತ್ತಿಯೊಂದಿಗೆ ಇಂತಹ ಹಲವು ಭಕ್ತಿಯುತ ದೇವರ ವಾಕ್ಯವನ್ನು ಓದಿ ಅವುಗಳ ಮೇಲೆ ಧ್ಯಾನವನ್ನು ಮಾಡಿ. ಇದರ ಬೆಲೆ ರೂ. 150/- ಆಗಿದ್ದು ಪ್ರತಿದಿನ ದೇವರನ್ನು ನಿಯಮಿತವಾಗಿ ಹುಡುಕಲು ಅತ್ಯಂತ ಸಹಕಾರಿಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನೀವಿದ್ದರೂ, ಆತನೊಂದಿಗೆ ಕಳೆಯುವ ಪವಿತ್ರ ಸಮಯವು ಆತನು ಬಯಸುವ ವ್ಯಕ್ತಿಯಾಗಿ ನಿಮ್ಮನ್ನು ಬದಲಾಯಿಸುತ್ತದೆ ಎಂಬುದನ್ನು ಮಾತ್ರ ಮರೆಯದಿರಿ!