ಇಂದಿನ ವಾಕ್ಯ ಭಾಗ: ಯೆಶಾಯ 41:10-13
ಹಾರಿಯಟ್ 19 ನೆಯ ಶತಮಾನದ ಅಮೆರಿಕದ ಮಹಾನಾಯಕಿಯಾಗಿದ್ದಳು. ತನ್ನ ವಿಶೇಷ ಧೈರ್ಯದ ಮೂಲಕ ಮತ್ತು ಯುಎಸ್ ನ ಮುಕ್ತ ಪ್ರದೇಶವನ್ನು ದಾಟುವ ಮೂಲಕ, ಗುಲಾಮತನದಿಂದ ತಪ್ಪಿಸಿಕೊಂಡು ಇತರ 300 ಕ್ಕೂ ಅಧಿಕ ಜನರನ್ನು ಬಿಡಿಸಲು ಪ್ರಯತ್ನಿಸಿದಳು. ತನ್ನ ಸ್ವಾತಂತ್ರದ ಬಗ್ಗೆ ಮಾತ್ರ ತೃಪ್ತಿಪಟ್ಟುಕೊಳ್ಳದೆ,ಸ್ನೇಹಿತರನ್ನೂ ಕುಟುಂಬದವರನ್ನೂ ಮತ್ತಿತರರನ್ನು ಮುಕ್ತಗೊಳಿಸಲು ಹತ್ತೊಂಬತ್ತು ಸಲ ವಾಪಾಸ್ಸಾಗಿದ್ದಳು. ಕೆಲ ಸಂದರ್ಭಗಳಲ್ಲಿ ಬರಿಗಾಲಲ್ಲಿಯೇ ಕೆನಡಾದಿಂದಲೂ ನಡೆದಿದ್ದಳು.
ಆಕೆಗೆ ಇಂತಹ ಧೈರ್ಯ ಬಂದಿದ್ದು ಹೇಗೆ? ಮಹಾ ನಂಬಿಕೆಯನ್ನು ಹೊಂದಿದ್ದ ಆಕೆ ಹೇಳಿದ್ದು “ನಾನು ಯಾವಾಗಲೂ ನಿನ್ನಲ್ಲಿಇರುತ್ತೇನೆ ಎಂದು ದೇವರಿಗೆ ಹೇಳುತ್ತೇನೆ, ನೀನು ನನ್ನನ್ನು ಅದೇ ರೀತಿಯಾಗಿ ನೋಡುತ್ತೀ” ಆಕೆ ಜನರನ್ನು ಬಿಡುಗಡೆ ಮಾಡುವಾಗ ದೇವರನ್ನು ಆತುಕೊಂಡದ್ದು ಆಕೆಗೆ ದೊರಕಿದ ಜಯದ ದೊಡ್ಡ ಗುರುತಾಗಿತ್ತು.
“ದೇವರನ್ನು ಹೊಂದಿಕೊಂಡಿರುವುದು” ಎಂದರೇನು? ಯೆಶಾಯನ ಗ್ರಂಥದ ಈ ವಚನವು ತಿಳಿಸುವ ಹಾಗೆ ನಾವು ದೇವರ ಕೈಯನ್ನು ಹಿಡಿದಿರುವಾಗ, ಆತನು ನಮ್ಮ ಕೈಹಿಡಿಯಲು ಮುಂದಾಗುತ್ತಾನೆ. ಭಯಪಡಬೇಡ, ನಾನೇ ನಿನಗೆ ಸಹಾಯ ಮಾಡುತ್ತೇನೆ,ಎಂದು ಹೇಳುವ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.” ಯೆಶಾಯ 41:13.
ಹಾರಿಯೆಟ್ ದೇವರನ್ನು ಗಟ್ಟಿಯಾಗಿ ಹಿಡಿದಳು, ಹೀಗಾಗಿ ಆತನು ಅವಳನ್ನು ಬಿಡಲಿಲ್ಲ. ನಿನ್ನ ಮುಂದಿರುವ ಸವಾಲುಗಳು ಯಾವುವು? ನಿನ್ನನ್ನು ಮತ್ತು ನಿನ್ನ ಜೀವಿತವನ್ನು ಕೈಹಿಡಿಯುವ ದೇವರನ್ನು ಬಿಡಬೇಡ. ಭಯಪಡಬೇಡ, ಆತನೇ ನಿನಗೆ ಸಹಾಯ ಮಾಡುವನು.
ಡೇವ್ ಬ್ರನ್ಹಾನ್
ಈಗ ನಿನ್ನ ಮುಂದಿರುವ ದೊಡ್ಡ ಸವಾಲುಗಳು ಯಾವುವು? ನಿನಗೆ ಆತನಲ್ಲಿ ನಂಬಿಕೆ ಇದೆ ಎಂದು ಆತನಿಗೆ ಹೇಗೆ ಹೇಳುವಿ?
ಪರಲೋಕದ ದೇವರೇ, ನಾನಾಗಿಯೇ ಜೀವಿಸಲು ಆಗುವುದಿಲ್ಲ, ನಿನ್ನ ಸಹಾಯವು ನನಗೆ ಬೇಕು. ನನಗೆ ತೊಂದರೆಗಳಿರುವಾಗ ನನ್ನ ಜೊತೆ ನೀನಿರುವಿ ಎಂದು ತಿಳಿದುಕೊಳ್ಳಲು ನನಗೆ ನೆರವಾಗು.
ಕನ್ನಡ ಭಾಷೆಯಲ್ಲೇ ಪ್ರಕಟವಾಗಿರುವ 2022ರ “ನಮ್ಮ ಅನುದಿನದ ಆಹಾರ”ದ ವಾರ್ಷಿಕ ಆವೃತ್ತಿಯೊಂದಿಗೆ ಇಂತಹ ಹಲವು ಭಕ್ತಿಯುತ ದೇವರ ವಾಕ್ಯವನ್ನು ಓದಿ ಅವುಗಳ ಮೇಲೆ ಧ್ಯಾನವನ್ನು ಮಾಡಿ. ಇದರ ಬೆಲೆ ರೂ. 150/- ಆಗಿದ್ದು ಪ್ರತಿದಿನ ದೇವರನ್ನು ನಿಯಮಿತವಾಗಿ ಹುಡುಕಲು ಅತ್ಯಂತ ಸಹಕಾರಿಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನೀವಿದ್ದರೂ, ಆತನೊಂದಿಗೆ ಕಳೆಯುವ ಪವಿತ್ರ ಸಮಯವು ಆತನು ಬಯಸುವ ವ್ಯಕ್ತಿಯಾಗಿ ನಿಮ್ಮನ್ನು ಬದಲಾಯಿಸುತ್ತದೆ ಎಂಬುದನ್ನು ಮಾತ್ರ ಮರೆಯದಿರಿ!